ಮಹಿಳಾ ಪೇದೆ ಹತ್ಯೆಯ ಹಿಂದೆ ಮತ್ತೊಂದು ಮಹಿಳಾ ಪೇದೆ
: ಪ್ರಿಯಕರನಿಗಾಗಿ ನಡೆದಿತ್ತು ಈ ಕೊಲೆ.
ತುಮಕೂರು ಜಿಲ್ಲೆಯ ಹುಳಿಯಾರು ಠಾಣೆಯ ಮಹಿಳಾ ಪೊಲೀಸ್
ಪೇದೆ ಹತ್ಯೆ ಕೇಸ್‌ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ತನ್ನ ಪ್ರಿಯಕರನಿಗಾಗಿ
ಮತ್ತೊಂದು ಮಹಿಳಾ ಪೊಲೀಸ್ ಪೇದೆ ಸುಧಾಳ ಹತ್ಯೆಗೆ ಸುಪಾರಿ ನೀಡಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.
ನಾಪತ್ತೆಯಾಗಿದ್ದ ಹುಳಿಯಾರು ಠಾಣೆ ಪೇದೆ ಸುಧಾ ಎನ್ನುವವರ
ಶವ ಹಾಸನ ಜಿಲ್ಲೆಯ ಅರಸೀಕೆರೆ ಬಳಿ ಪತ್ತೆಯಾಗಿತ್ತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ
ಪರಿಶೀಲಿಸಿದಾಗ ಶವ ಸುಧಾ ಎನ್ನುವವರದ್ದು ಎಂದು ಕಂಡುಬಂದಿದೆ. ಸುಧಾಳನ್ನ ಸ್ವತಃ ತನ್ನ ಸಹೋದರ ಮಂಜುನಾಥ್
ಎಂಬಾತ ಕೊಲೆ ಮಾಡಿ ಬಳಿಕ ಶಿವಮೊಗ್ಗದ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಧಾಳನ್ನ
ಕೊಲೆ ಮಾಡಿದ್ದು ನಾನೇ ಎಂದು ಆಕೆಯ ಸಹೋದರ ಮಂಜುನಾಥ್ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದರು.
ಪ್ರಸ್ತುತ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು
ತನಿಖೆ ಕೈಗೊಂಡಾಗ ಸ್ಫೋಟಕ ಮಾಹಿತಿ ಬಿಚ್ಚಿಕೊಂಡಿದೆ. ತನ್ನ ಪ್ರಿಯಕರನಿಗಾಗಿ ಮತ್ತೊಂದು ಮಹಿಳಾ ಪೊಲೀಸ್
ಪೇದೆ ಸುಧಾಳ ಹತ್ಯೆಗೆ ಸುಪಾರಿ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಹುಳಿಯಾರು ಪೊಲೀಸ್
ಠಾಣೆಯ ಮಹಿಳಾ ಪೇದೆ ರಾಣಿ ಹಾಗೂ ಮತ್ತೊಬ್ಬ ಆರೋಪಿ ನಿಖೇಶ್ ಎನ್ನುವಾತನನ್ನು ಪೊಲೀಸರು ಹೆಡೆಮುರಿ
ಕಟ್ಟಿದ್ದು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ
ಹತ್ಯೆಗೆ ಸುಪಾರಿ ನೀಡಿರುವುದು ತಿಳಿದುಬಂದಿದೆ.
ಒಂದೇ ಠಾಣೆಯ ಮಹಿಳಾ ಪೇದೆಗಳಾಗಿದ್ದ ಕೊಲೆಯಾದ ಸುಧಾ ಹಾಗೂ
ರಾಣಿ ಇಬ್ಬರೂ ಬೆಂಗಳೂರಿನಲ್ಲಿ ಪೊಲೀಸ್
ಕೆಲಸ ನಿರ್ವಹಿಸುತ್ತಿದ್ದವರನ್ನು ಪ್ರೀತಿ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಸುಮಾರು ತಿಂಗಳುಗಳಿಂದ
ಸುಧಾ ಹಾಗೂ ರಾಣಿ ಗಲಾಟೆ ಮಾಡಿಕೊಂಡಿದ್ದರು. ಸುಧಾಳನ್ನ ಕೊಲೆ ಮಾಡಿದರೆ ಆತ ತನಗೆ ಸಿಗುತ್ತಾನೆಂದು
ತಿಳಿದ ರಾಣಿ ಕೊಲೆಗೆ ಸುಪಾರಿ ನೀಡಿದ್ದಾಳೆ. ಸುಧಾ ಕೊಲೆಗೆ 5 ಲಕ್ಷ ಹಣಕ್ಕೆ ಸುಪಾರಿ ನೀಡಿದ್ದಳು
ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಕರ್ತವ್ಯಕ್ಕೆ ಬಂದಿದ್ದ ಸುಧಾಳನ್ನ ನಿಖೇಶ್, ಸೆಪ್ಟಂಬರ್ 13ರ ಸಂಜೆ ಆಸ್ಪತ್ರೆಗೆಂದು ಕರೆದೊಯ್ಯುವ ನೆಪದಲ್ಲಿ ತಿಪಟೂರಿಗೆ ಕರೆದುಕೊಂಡು
ಹೋಗಿದ್ದಾನೆ. ಆಗ ತಿಪಟೂರಿನ ಹಾಸನ ಸರ್ಕಲ್ ಬಳಿ ಸುಧಾಳ ಸಹೋದರ ಮಂಜುನಾಥ್ ಕಾರು ಹತ್ತಿಕೊಂಡಿದ್ದಾನೆ.
ನಂತರ ಸುಧಾ ಕಣ್ಣಿಗೆ ಸ್ಪ್ರೈ ಮಾಡಿದ್ದಾನೆ. ಕಣ್ಣು ಉಜ್ಜಿಕೊಳ್ಳುವಷ್ಟರಲ್ಲಿ ಸುಧಾ ಎದೆಭಾಗಕ್ಕೆ
ಚಾಕು ಇರಿದು ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಇದಾದ ನಂತರ ಯಾರಿಗೂ ಸುಳಿವು
ಸಿಗದಂತೆ ತಿಪಟೂರು-ಅರಸಿಕೆರೆ ಮಾರ್ಗ ಮದ್ಯೆ ಸುಧಾಳ ಶವವನ್ನ ರಸ್ತೆಬದಿಯ ಪೊದೆಯೊಂದರಲ್ಲಿ ಬಿಸಾಡಿ
ಎಸ್ಕೇಪ್ ಆಗಿದ್ರು. ಬಳಿಕ ಕೊಲೆಗೆ ಹೆದರಿ ಸಹೋದರ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ . ಸುಧಾಳನ್ನ ಕೊಲೆಗೈದ ರಾತ್ರಿಯೇ ಶಿವಮೊಗ್ಗಕ್ಕೆ ತೆರಳಿದ್ದ
ಮಂಜುನಾಥ್, ಡೆತ್ ನೋಟ್ ಬರೆದಿಟ್ಟು ವಿಷ ಕುಡಿದು ಶಿವಮೊಗ್ಗದ ಲಾಡ್ಜ್ವೊಂದರಲ್ಲಿ
ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಜುನಾಥ್ ಬರೆದ ಡೆತ್ ನೋಟ್‌ನಿಂದ ಸುಧಾ ಶವ ಪತ್ತೆಯಾಗಿತ್ತು. ಇದೀಗ
ಆಕೆಯ ಕೊಲೆ ರಹಸ್ಯ ಬಯಲಾಗಿದೆ. 2 ವರ್ಷದ ಹಿಂದೆ ಸುಧಾ ಅವರ ಪತಿ ಸಾವನ್ನಪ್ಪಿದ್ದು, ಅವರಿಗೆ 14 ವರ್ಷದ ಗಂಡು ಮಗು ಹಾಗೂ 10 ವರ್ಷದ ಹೆಣ್ಣು ಮಗು ಇದೆ. ಆದರೆ ಈಗ ಮಹಿಳಾ ಪೇದೆ ಸುಧಾಳನ್ನ ಸ್ವತಃ ತನ್ನ ಸಹೋದರನೇ
ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತವೇ ಸರಿ.
Reporter:
MADHUSUDHAN S (ASHWIN) - Chief Editor
No comments:
Post a Comment